*ವಿವೇಕಾನಂದ* :
ನಿಶ್ಯಬ್ದವಾಗಿರು. ಕಾರಣ ನಾಣ್ಯ ಸದ್ದು ಮಾಡಿದಷ್ಟು ನೋಟುಗಳು ಸದ್ದು ಮಾಡದು, ಮೌಲ್ಯಭರಿತವಾದುದು ಹಾಗೆ ಇರುತ್ತದೆ.
*ಷೇಕ್ಸ್‌ಪಿಯರ್*:
ಇತರರ ಭಾವನೆಗಳೊಂದಿಗೆ ಆಟವಾಡ ಬೇಡ... ಹೀಗೆ ಮಾಡುವುದರಿಂದ ನೀನು ಆಡಿದ ಆಟದಲ್ಲಿ ನೀನು ಗೆಲ್ಲಬಹುದು ಆದರೆ ಒಬ್ಬ ಒಳ್ಳೆಯ ವ್ಯಕ್ತಿಯನ್ನು ನೀನು ನಿನ್ನ ಜೀವನದಲ್ಲಿ ಕಳೆದುಕೊಳ್ಳುತ್ತೀಯ.
*ನೆಪೋಲಿಯನ್*:
ಈ ಪ್ರಪಂಚ ಬಹಳ ತೊಂದರೆಗಳನ್ನು ಎದುರಿಸುತ್ತಿದೆ. ಅದಕ್ಕೆ ಕಾರಣ ಅಶಾಂತಿಯನ್ನು ರೊಚ್ಚಿಗೆಬ್ಬಿಸುವ ಕೆಟ್ಟ ವ್ಯಕ್ತಿಗಳಲ್ಲ, ಅದು ಒಳ್ಳೆಯ ವ್ಯಕ್ತಿಗಳ ಮೌನ.
*ಐನಸ್ಟೀನ್*:
ನಾನು ಅವರ ಬಗ್ಗೆ ಬಹಳ ಕೃತಜ್ಞತೆಯಿಂದ ಇದ್ದೇನೆ. ಯಾರಾದರೆ ನನ್ನನ್ನು ತಿರಸ್ಕರಿಸಿದರೋ.... ಅವರಿಂದಲೇ ನಾನು ನನ್ನಷ್ಟಕ್ಕೆ ನಾನೇ ಬೆಳೆದೆನು.
*ಅಬ್ರಹಾಂ ಲಿಂಕನ್*:
ನಿನ್ನಲ್ಲಿನ ಸ್ನೇಹ ಗುಣ ಎಂಬುದು ನಿನ್ನ ಬಲಹೀನತೆಯಾದರೆ, ಪ್ರಪಂಚದಲ್ಲಿನ ಎಲ್ಲರಿಗಿಂತಲೂ ನೀನು ಬಹಳ ಬಲಶಾಲಿ ಎಂದರ್ಥ.
*ಚಾರ್ಲಿ ಚಾಪ್ಲಿನ್*:
ನಗು ನಗುತ್ತಾ ಜೀವನವನ್ನು ನಡೆಸುತ್ತಿರುವವರಿಗೆ ಜೀವನದಲ್ಲಿ ಕಷ್ಟಗಳಿಲ್ಲ ಎಂದು ಭಾವಿಸಬೇಡಿ. ಅವರ ಬಳಿ ಅದನ್ನು ಎದುರಿಸುವ ಗುಣ ಇರುವುದರಿಂದಲೇ ಅವರು ಆ ರೀತಿ ವರ್ತಿಸುತ್ತಾರೆ.
*ವಿಲಿಯಂ ಆರ್ತುರ್:*
ಅವಕಾಶಗಳು ಸೂರ್ಯ ಕಿರಣಗಳಂತೆ. ಆದ್ದರಿಂದ, ಅವುಗಳನ್ನು ಸಾಧ್ಯವಾದಷ್ಟು ಬೇಗ ನಮ್ಮದಾಗಿಸಿಕೊಳ್ಳಬೇಕು. ನಿಧಾನಿಸಿದರೆ ಅವುಗಳನ್ನು ಕಳೆದು ಕೊಳ್ಳಬೇಕಾಗುತ್ತದೆ.
*ಹಿಟ್ಲರ್*:
ನೀವು ಬೆಳಕಿನಲ್ಲಿ ಇರುವಷ್ಟು ಕಾಲ ನಿಮ್ಮನ್ನು ಎಲ್ಲರೂ ಅನುಸರಿಸಿತ್ತಾರೆ. ಅದೇ ನೀನು ಕತ್ತಲಲ್ಲಿದ್ದರೆ ನಿನ್ನ ನೆರಳು ಸಹ ನಿನ್ನೊಂದಿಗೆ ಬರುವುದಿಲ್ಲ..